Kit Link: ಜಾನುವಾರು ಸಾಕಾಣಿಕೆ ರೈತರಿಗೆ ಗುಡ್ ನ್ಯೂಸ್! ಉಚಿತ ಮೇವಿನ ಕಿಟ್ ಜೊತೆಗೆ ₹5000/- ಸಹಾಯಧನ! ಇಂದೇ ಅಪ್ಲೈ ಮಾಡಿ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿಯಲ್ಲಿ ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್! ರಾಜ್ಯ ಸರ್ಕಾರದ ಮೇವಿನ ಕಿರು ಪೊಟ್ಟಣಗಳ ವಿತರಣಾ ಯೋಜನೆಯಡಿಯಲ್ಲಿ ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿರುವ ರೈತರಿಗೆ ಉಚಿತ ಮೇವಿನ ಬೀಜಗಳ ಕಿರು ಪೊಟ್ಟಣವನ್ನು ವಿತರಣೆ ಮಾಡಲಾಗುತ್ತಿದೆ.
ಹವಾಮಾನಗಳ ಬದಲಾವಣೆ, ಮಳೆಯ ಕೊರತೆ, ಬೆಳೆ ನಷ್ಟಗಳನ್ನು ಅನುಭವಿಸುತ್ತಿದ್ದ ರೈತರಿಗೆ ಹೈನುಗಾರಿಕೆಯೇ ಮುಖ್ಯ ಆರ್ಥಿಕ ಆಸರೆ ಆಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಬರಗಾಲದಿಂದಾಗಿ ಜಾನುವಾರುಗಳಿಗೆ ಹಸಿರು ಮೇವಿನ ಕೊರತೆ ಆಗುತ್ತಿದೆ. ಗುಣಮಟ್ಟದ ಹಸಿರು ಮೇವಿನ ಕೊರತೆಯಿಂದಾಗಿ ಜಾನುವಾರುಗಳ ಹಾಲಿನ ಇಳುವರಿ ಕಡಿಮೆಯಾಗುತ್ತಿದ್ದು, ಇದರ ಜಾನುವಾರುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಈ ಎಲ್ಲ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? ಅಗತ್ಯವಾದ ದಾಖಲೆಗಳು ಯಾವುವು? ಕಿಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಉಚಿತ ಮೇವಿನ ಕಿಟ್ ನಲ್ಲಿ ಏನೆಲ್ಲಾ ಸಿಗಲಿದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.
ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಮೇವಿನ ಕಿರು ಪೊಟ್ಟಣಗಳ ವಿತರಣಾ ಯೋಜನೆ |
| ಅನುಷ್ಠಾನ ಇಲಾಖೆ | ಪಶುಪಾಲನಾ ಮಾತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ |
| ಅರ್ಹ ಫಲಾನುಭವಿಗಳು | ಜಾನುವಾರುಗಳನ್ನು ಹೊಂದಿರುವ ರಾಜ್ಯದ ರೈತರು |
| ಯೋಜನೆಯ ಲಾಭ | ರೈತರಿಗೆ ಸಂಪೂರ್ಣ ಉಚಿತವಾಗಿ ಜಾನುವಾರುಗಳ ಮೇವಿನ ಕಿಟ್ ಸಿಗಲಿದೆ |
| ಯೋಜನೆಯ ಉದ್ದೇಶ | ಜಾನುವಾರುಗಳ ಮೇವಿನ ಕೊರತೆ ನೀಗಿಸುವುದು ಹಾಗೂ ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುವುದು |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಮೇವಿನ ಕಿರು ಪೊಟ್ಟಣಗಳ ವಿತರಣಾ ಯೋಜನೆ ಬಗ್ಗೆ:
ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಉಚಿತ ಮೇವಿನ ಕಿರು ಪೊಟ್ಟಣಗಳನ್ನು ನೀಡಿ ತಮ್ಮ ಜಮೀನಿನಲ್ಲಿ ಪೌಷ್ಟಿಕ ಹಾಗೂ ಗುಣಮಟ್ಟದ ಹಸಿರು ಮೇವುಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಯೋಜನೆಯೇ ಮೇವಿನ ಕಿರು ಪೊಟ್ಟಣಗಳ ವಿತರಣಾ ಯೋಜನೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ಪಶುಪಾಲನಾ ಮಾತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಲಾಗಿದ್ದು, ರಾಜ್ಯದಲ್ಲಿ ಜಾನುವಾರುಗಳು ಸಾಕಾಣಿಕೆ ಮಾಡುತ್ತಿರುವ, FRUITS ಐಡಿಯನ್ನು ಹೊಂದಿರುವ ಹಾಗೂ ಜಮೀನಿನಲ್ಲಿ ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಮುಖ್ಯ ಉದ್ದೇಶ ಜಾನುವಾರುಗಳ ಪೌಷ್ಟಿಕಾಂಶವನ್ನು ಹೆಚ್ಚಿಸಿ ಹಾಲಿನ ಇಳುವರಿಯನ್ನು ಸುಧಾರಿಸುವುದಾಗಿದೆ.
ಯೋಜನೆಯ ಉದ್ದೇಶ:
- ಪ್ರತಿಯೊಬ್ಬ ರೈತರಿಗೂ ಕೂಡ ತಮ್ಮ ಜಮೀನಿನಲ್ಲೇ ಜಾನುವಾರಿಗಳಿಗೆ ಅಗತ್ಯವಾದ ಪೌಷ್ಟಿಯ ಹಸಿರು ಮೇವುಗಳನ್ನು ಬೆಳೆಯಲು ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಮೇವಿನ ಕಿರು ಪೊಟ್ಟಣಗಳಲ್ಲಿ ಕಡಿಮೆ ನೀರಿನಲ್ಲಿ, ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ಸುಧಾರಿತ ಮೇವಿನ ಬೀಜಗಳನ್ನು ಗ್ರಾಮೀಣ ಭಾಗದ ರೈತರಿಗೆ ವಿತರಣೆ ಮಾಡುವ ಮೂಲಕ ಹಸಿರು ಮೇವನ್ನು ಅವರದೇ ಜಮೀನಿನಲ್ಲಿ ವರ್ಷವಿಡೀ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ರೈತರಿಗೆ ಈ ಒಂದು ಯೋಜನೆಯಡಿಯಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಯುಕ್ತ ಹಸಿರು ಮೇವುಗಳ ತಳಿಗಳನ್ನು ನೀಡುವ ಮೂಲಕ ಜಾನುವಾರುಗಳ ಪೌಷ್ಟಿಕಾಂಶವನ್ನು ಹೆಚ್ಚಿಸಿ, ಹಾಲಿನ ಇಳುವರಿಯನ್ನು ಹೆಚ್ಚಿಸುವುದು. ಇದರನ್ನು ರೈತರ ಆದಾಯ ಮಟ್ಟವು ಸುಧಾರಿಸುತ್ತದೆ.
- ಮೇವಿನ ಕಿರು ಪೊಟ್ಟಣಗಳ ವಿತರಣಾ ಯೋಜನೆಯಡಿಯಲ್ಲಿ ರೈತರಿಗೆ ಉಚಿತವಾಗಿ ಮೇವು ಕಿಟ್ ಅನ್ನು ವಿತರಣೆ ಮಾಡುವ ಮೂಲಕ ರೈತರು ಮಾರುಕಟ್ಟೆಯಲ್ಲಿ ದುಬಾರಿ ಬೆಳೆಗೆ ಸಿಗುವ ಒಣ ಮೇವು ಹಾಗೂ ಹಿಂಡಿಯ ಮೇಲಿನ ಅವಲಂಬನೆಯನ್ನು ಕಡಿಮೆಮಾಡಿ ರೈತರ ಮೇಲಿನ ಆರ್ಥಿಕ ಹೊರೆಯನ್ನು ಕೆಡಿಮೆ ಮಾಡುವುದು.
ಉಚಿತ ಮೇವಿನ ಕಿಟ್ ನಲ್ಲಿ ಏನೆಲ್ಲಾ ಸಿಗಲಿದೆ?
ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಉಚಿತವಾಗಿ ಮೇವಿನ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದು, ಈ ಒಂದು ಮೇವಿನ ಕಿಟ್ ಗಳಲ್ಲಿ ಯಾವ ಯಾವ ಮೇವಿನ ತಳಿಗಳಿವೆ ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳೋಣ.
- ಆಫ್ರಿಕನ್ ಟಾಲ್ ಮೆಕ್ಕೆಜೋಳ:
ಈ ಒಂದು ಮೇವಿನ ತಳಿಯಲ್ಲಿ ಜೀರ್ಣವಾಗುವ ಪ್ರೊಟೀನ್ ಮತ್ತು ಶಕ್ತಿಯ ಅಂಶ ಇರುತ್ತದೆ. ಇದರಿಂದ ಇದು ಜಾನುವಾರುಗಳಿಗೆ ಅತ್ಯಂತ ಪ್ರಿಯವಾದ ಮೇವಾಗಿರುತ್ತದೆ. ಅಷ್ಟೇ ಅಲ್ಲದೆ ಈ ಒಂದು ಮೇವನ್ನು ಬಿತ್ತನೆ ಮಾಡಿದ 60 ರಿಂದ 70 ರ ಒಳಗೆ ಕಟಾವಿಗೆ ಬರುತ್ತದೆ.
- ಮಲ್ಟಿ ಕಟ್ ಮೇವಿನ ಜೋಳ:
ಮಲ್ಟಿ ಕಟ್ ಮೇವಿನ ಜೋಳವನ್ನು ಒಂದೇ ಬಾರಿಗೆ ಬಿತ್ತನೆ ಮಾಡಿದರೆ ಸಾಕಾಗುತ್ತದೆ. ಹಲವು ಬರಿ ಕಟಾವು ಮಾಡಬಹುದು. ಇದರಿಂದಾಗಿ ಪದೇ ಪದೇ ಬಿತ್ತನೆ ಮಾಡುವ ಖರ್ಚು ಹಾಗೂ ಶ್ರಮ ಉಳಿತಾಯವಾಗುತ್ತದೆ. ಜೊತೆಗೆ ಕಡಿಮೆ ನೀರಿನಲ್ಲಿ ಕೂಡ ಈ ಒಂದು ಬೆಳೆಯನ್ನು ಬೆಳೆಯಬಹುದು.
- ಸುಧಾರಿತ ಸಜ್ಜೆ:
ಕಡಿಮೆ ಮಳೆ ಬೀಳುವ ಹಾಗೂ ಒಣ ಬೇಸಾಯ ಪ್ರದೇಶಗಳ ಈ ಒಂದು ಬೆಳೆಯನ್ನು ಬೆಳೆಯಬಹುದು. ಜಾನುವಾರುಗಳ ಜೀರ್ಣಕ್ರಿಯೆಗೆ ಇದು ಒಳ್ಳೆಯ ಮೇವಾಗಿದ್ದು, ಜಾನುವಾರುಗಳ ಶರೀರದ ಉಷ್ಣತೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ.
- ಕುದುರೆಮೆಂತೆ:
ಈ ಒಂದು ಮೇವು ಅತ್ಯಧಿಕ ಪ್ರಮಾಣದ ಪ್ರೊಟೀನ್ ಮತ್ತು ಕ್ಯಾಲ್ಶಿಯಂ ಅನ್ನು ಒಳಗೊಂಡಿರುತ್ತದೆ. ಇದು ಹಸುಗಳ ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಕಿಟ್ ಪಡೆಯಲು ಅಗತ್ಯವಾದ ಅರ್ಹತೆ:
- ರೈತರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.
- ರೈತರು ಕಡ್ಡಾಯವಾಗಿ ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿರಬೇಕು.
- ರೈತರು ಕಡ್ಡಾಯವಾಗಿ ಕರ್ನಾಟಕ ಸರ್ಕಾರದ ಕೃಷಿ ಮತ್ತು ಪಶುಸಂಗೋಪನೆ ಇಲಾಖೆಯ FRUITS ಪೋರ್ಟಲ್ ನಲ್ಲಿ ನೋಂದಣಿಯಾಗಿರಬೇಕು.
- ಜಮೀನಿನಲ್ಲಿ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಒಮ್ಮೆ ಈ ಒಂದು ಯೋಜನೆಯಡಿಯಲ್ಲಿ ಮೇವು ಕಿಟ್ ಪಡೆದ ರೈತರು, ಮೇವು ಕಿಟ್ ಪಡೆದು ಒಂದು ವರ್ಷ ಪೂರ್ಣಗೊಂಡ ನಂತರವೇ ಇನ್ನೊಂದು ಬಾರಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಮೀನಿನ ಪಹಣಿ
- FRUITS ಐಡಿ
- ರೇಷನ್ ಕಾರ್ಡ್
- ಜಾತಿ ಪ್ರಮಾಣಪತ್ರ
ಮೇವಿನ ಕಿಟ್ ಸಲ್ಲಿಸುವುದು ಹೇಗೆ?
- ಆಸಕ್ತ ರೈತರು ತಮ್ಮ ಹತ್ತಿರದ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಅಥವಾ ತಾಲ್ಲೂಕು ಪಶುಸಂಗೋಪನಾ ಇಲಾಖೆಯ ಕಚೇರಿಗೆ ಭೇಟಿ ನೀಡಿ.
- ಕಚೇರಿಯಲ್ಲಿ ಲಭ್ಯವಿರುವ ಮೇವಿನ ಕಿರು ಪೊಟ್ಟಣ ವಿತರಣೆ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಳ್ಳಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ವೈಯಕ್ತಿಕ ವಿವರ, ವಿಳಾಸ ಹಾಗೂ ಕೃಷಿ ವಿವರಗಳನ್ನು ಭರ್ತಿ ಮಾಡಿ.
- ಭರ್ತಿ ಮಾಡಿರುವ ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಸೇರಿದಂತೆ ಈ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಿ.
- ಅರ್ಜಿ ಸ್ವೀಕರಿಸಿದ ನಂತರ ಪಶು ವೈದ್ಯಕೀಯ ಅಧಿಕಾರಿಗಳು ರೈತರ ಭೂ ದಾಖಲೆಗಳನ್ನು ಹಾಗೂ ಜಾನುವಾರುಗಳ ಲಭ್ಯತೆಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಕೊನೆಯ ಮಾತು:
ಕರ್ನಾಟಕ ಸರ್ಕಾರದ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ನೀಡಲಾಗುತ್ತಿರುವ ಉಚಿತ ಮೇವು ಕಿಟ್ ಗಳು ಕೇವಲ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ಮಾತ್ರ ನೆರವಾಗುವುದಿಲ್ಲ. ಇದು ರೈತರ ಜೀವನ ಮಟ್ಟವನ್ನು ಸುಧಾರಿಸುತ್ತದೆ. ಅಂದರೆ ಜಾನುವಾರುಗಳಿಗೆ ಅಗತ್ಯಾದ ಪೌಷ್ಟಿಕಾಂಶಯುಕ್ತ ಮೇವುಗಳನ್ನು ನೀಡುವ ಮೂಲಕ ಹಸುಗಳ ಹಾಲಿನ ಇಳುವರಿ ಹೆಚ್ಚಾಗಿ, ರೈತರ ಆದಾಯ ಮಟ್ಟವು ಸುಧಾರಿಸುತ್ತದೆ. ಮೇವಿನ ಕಿಟ್ ಅಗತ್ಯವಿರುವ ರೈತರು ತಮ್ಮ ಹತ್ತಿರದ ಪಶುಸಂಗೋಪನಾ ಇಲಾಖೆ ಅಥವಾ ಪಶು ಆಸ್ಪತ್ರೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.



