CY: ಮಹಿಳೆಯರಿಗೆ ₹45,000 ಸಹಾಯಧನ! ಚೇತನ ಯೋಜನೆಗೆ ಅರ್ಜಿ ಆಹ್ವಾನ! ಅಕ್ಟೋಬರ್ 31 ಕೊನೆಯ ದಿನ
CY: ಅತ್ಯಂತ ದುರ್ಬಲ ಹಾಗೂ ಶೋಷಿತ ವರ್ಗಗಳ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಯನ್ನು ಪರಿಚಯಿಸಿದ್ದು, ಆ ಯೋಜನೆಯೇ ಚೇತನ ಯೋಜನೆ. ಈ ಯೋಜನೆಯಡಿಯಲ್ಲಿ, ಬದುಕಿನ ಕರಾಳ ಜಗತ್ತಿನಿಂದ ಹೊರಬರಲು ಇಚ್ಛಿಸುವ ದಮನಿತ ಮಹಿಳೆಯರು, ಮಾಜಿ ದೇವದಾಸಿಗಳು ಹಾಗೂ ತೃತೀಯ ಲಿಂಗಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಪುನರ್ವಸತಿ ಒದಗಿಸಲಾಗುತ್ತದೆ.
ಚೇತನ ಯೋಜನೆಯಡಿಯಲ್ಲಿ ದಮನಿತ ಮಹಿಳೆಯರಿಗೆ ಕೇವಲ ಸಾಮಾಜಿಕ ಭದ್ರತೆ ಒದಗಿಸುವುದಷ್ಟೇ ಅಲ್ಲದೆ, ಅವರು ಯಾರ ಹಂಗಿಲ್ಲದೆ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ನೆರವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಾಮಾಜಿಕ ದುರ್ಬಲ ವರ್ಗಗಳ ಮಹಿಳೆಯರು ಸ್ವಂತವಾಗಿ ಸಣ್ಣ ಉದ್ಯೋಗವನ್ನು ಪ್ರಾರಂಭಿಸಲು, ಕಲೆ ಮತ್ತು ಕರಕುಶಲ ಹಾಗೂ ದರ್ಜೆ ಅಥವಾ ಯಾವುದೇ ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.
ಈ ಹಿಂದೆ ಚೇತನ ಯೋಜನೆಯಡಿಯಲ್ಲಿ ನೀಡುತ್ತಿದ್ದ ಆರ್ಥಿಕ ನೆರವನ್ನು ಹೆಚ್ಚಿಗೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಗೆ ಈ ಒಂದು ಯೋಜನೆಯಡಿಯಲ್ಲಿ ಎಷ್ಟು ಆರ್ಥಿಕ ನೆರವು ಲಭಿಸಲಿದೆ? ಈ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ ಯಾವಾಗ? ಅಗತ್ಯ ದಾಖಲೆಗಳು ಯಾವುದು? ಅರ್ಹತಾ ಮಾನದಂಡಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ನೀದಲಾಗಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಯೋಜನೆಯ ಅವಲೋಕನ:
| ಯೋಜನೆಯ ಹೆಸರು | ಚೇತನ ಯೋಜನೆ |
| ಅನುಷ್ಠಾನ ಇಲಾಖೆ | ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಇಲಾಖೆ |
| ಅರ್ಹ ಫಲಾನುಭವಿಗಳು | ಶೋಷಿತ ಹಾಗೂ ದಮನಿತ ಮಹಿಳೆಯರು |
| ಸಿಗುವ ಸಹಾಯಧನದ ವಿವರ | ರೂ. 45,000/- |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಅಥವಾ ಆಫ್ಲೈನ್ |
| ಕೊನೆಯ ದಿನಾಂಕ | 31-10-2026 |
| ಯೋಜನೆಯ ಉದ್ದೇಶ | ಶೋಷಿತ ಮತ್ತು ದಮನಿತ ಮಹಿಳೆಯರಿಗೆ ಆರ್ಥಿಕ ಪುನರ್ವಸತಿ ಒದಗಿಸುವುದು ಹಾಗೂ ಅವರ ಸ್ವಂತ ಉದ್ಯೋಗವನ್ನು ಪ್ರೋತ್ಸಾಹಿಸುವುದು |
ಚೇತನ ಯೋಜನೆ ಎಂದರೇನು?
ಕರ್ನಾಟಕ ಸರ್ಕಾರವು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಮಹಿಳೆಯರಿಗೆ ಶೋಷಿತ ಹಾಗೂ ದಮನಿತ ಮಹಿಳೆಯರ ಆರ್ಥಿಕ ಪುನರ್ವಸತಿಗಾಗಿ ಜಾರಿಗೊಳಿಸಿರುವ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ. ಈ ಒಂದು ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಜಾರಿಗೊಳಿಸಲಾಗಿದ್ದು, ಬದುಕಿನ ಕರಾಳ ಜಗತ್ತಿನಿಂದ ಹೊರಬರಲು ಬಯಸುವ ದಮನಿತ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಹಾಗೂ ಸಮಾಜದಲ್ಲಿ ಸ್ವಾತಂತ್ರ್ಯವಾಗಿ ಬದುಕಲು ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.
ಚೇತನ ಯೋಜನೆಯು ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ಮಾಜಿ ದೇವದಾಸಿಗಳು ಹಾಗೂ ತೃತೀಯ ಲಿಂಗಿಗಳಿಗೆ ಅನ್ವಯವಾಗಲಿದ್ದು, ಅರ್ಹ ಫಲಾನುಭವಿಗಳು ಸ್ವಂತವಾಗಿ ಸಣ್ಣ ಉದ್ಯಮ, ವ್ಯಾಪಾರ, ಹೋಲಿಗೆ, ಹೈನುಗಾರಿಕೆ, ಪ್ಯಾನ್ಸಿ ಸ್ಟೋರ್ ಗಳಂತಹ ಉದ್ಯಮವನ್ನು ಪ್ರಾರಂಭಿಸಲು ರೂ. 45000/- ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಸಿಗುವ ಈ ಒಂದು ಹಣವು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಯೋಜನೆಯ ಮುಖ್ಯ ಉದ್ದೇಶ:
- ದಮನಿತ ಹಾಗೂ ಶೋಷಿತ ಮಹಿಳೆಯರಿಗೆ ಗೌರವಯುತ ಜೀವನವನ್ನು ಒದಗಿಸುವುದು:
ಶೋಷಿತ ಹಾಗೂ ದಮನಿತ ಮಹಿಳೆಯರನ್ನು ಬದುಕಿನ ಕರಾಳ ಜಗತ್ತಿನಿಂದ ಮುಕ್ತಗೊಳಿಸಿ,ಅವರ ಮೇಲಿನ ಸಾಮಾಜಿಕ ಕಳಂಕವನ್ನು ಮುಕ್ತಗೊಳಿಸಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಆರ್ಥಿಕ ಪುನರ್ವಸತಿ ಒದಗಿಸುವುದು:
ಸಮಾಜದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಿಳಾ ಲೈಂಗಿಕ ಕಾರ್ಯಕರ್ತೆಯರಿಗೆ, ಮಾಜಿ ದೇವದಾಸಿಯರಿಗೆ ಮತ್ತು ತೃತೀಯ ಲಿಂಗಿಗಳಿಗೆ ಚೇತನ ಯೋಜನೆಯಡಿಯಲ್ಲಿ ರೂ. 45000/- ಆರ್ಥಿಕ ನೆರವನ್ನು ನೀಡುವ ಮೂಲಕ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು.
- ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವುದು:
ಶೋಷಿತ ಹಾಗೂ ದಮನಿತ ಮಹಿಳೆಯರಿಗೆ ಚೇತನ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುವ ಮೂಲಕಾ ಸಣ್ಣ ಪ್ರಮಾಣದ ವ್ಯಾಪರ, ಕರಕುಶಲ, ಕಲೆ, ಹೈನುಗಾರಿಕೆ ಮುಂತಾದ ಸಣ್ಣ ಉದ್ಯೋಗವನ್ನು ಪ್ರಾರಂಭಿಸಲು ಉತ್ತೇಜನ ನೀಡುವುದು.
ಚೇತನ ಯೋಜನೆಯ ಪ್ರಮುಖ ಸೌಲಭ್ಯಗಳು:
ಕರ್ನಾಟಕ ಸರ್ಕಾರವು ಈ ಮೊದಲು ಚೇತನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರೂ. 30,000/- ಆರ್ಥಿಕ ನೆರವನ್ನು ನೀಡುತ್ತಿದ್ದು, ಪ್ರಸ್ತುತ ವರ್ಷದಿಂದ ರೂ. 45,000/- ಹೆಚ್ಚಿಗೆ ಮಾಡಲಾಗಿದೆ. ಈ ಒಂದು ಹಣವು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಒಂದು ಹಣವು ಸರ್ಕಾರ ನೀಡುತ್ತಿರುವ ಸಂಪೂರ್ಣ ಉಚಿತ ಸಹಾಯಧನವಾಗಿರುವುದರಿಂದ, ಸರ್ಕಾರಕ್ಕೆ ಈ ಹಣವನ್ನು ಹಿಂದಿರುಗಿಸುವ ಅಗತ್ಯ ಇಲ್ಲ. ಅರ್ಹ ಫಲಾನುಭವಿಗಳು ಈ ಹಣವನ್ನು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಮಾತ್ರ ಬಳಸಿಕೊಳ್ಳಬಹುದು.
ಅರ್ಹತಾ ಮಾನದಂಡಗಳು:
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು 20 ವರ್ಷದಿಂದ 55 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಲೈಂಗಿಕ ಕಾರ್ಯಕರ್ತೆಯರು, ಮಾಜಿ ದೇವದಾಸಿ ಮಹಿಳೆಯರು, ತೃತೀಯ ಲಿಂಗಿಗಳಿಗೆ ಈ ಯೋಜನೆ ಅನ್ವಯವಾಗಲಿದೆ.
- ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
- ಮಹಿಳಾ ಅಭಿವೃದ್ಧಿ ನಿಗಮದ ಯಾವುದೇ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳು ಇನ್ನೊಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಸೈಜ್ ಫೋಟೋ
- ವಯಸ್ಸಿನ ಪುರಾವೆ
- ವಾಸಸ್ಥಳ ಪ್ರಮಾಣಪತ್ರ
- ದೇವದಾಸಿ ಗುರುತಿನ ಚೀಟಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಸ್ವಯಂ ಉದ್ಯೋಗದ ಯೋಜನಾ ವರದಿ
- ಇತರೆ ಅಗತ್ಯ ದಾಖಲೆಗಳು
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಮೊದಲು ಕರ್ನಾಟಕ ಸರ್ಕಾರದ ಸೇವಾ ಸಿಂಧೂ ಪೋರ್ಟಲ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿದ್ದರೆ ಮೊಬೈಲ್ ನಂಬರ್ ಹಾಗೂ ಒಟಿಪಿ ಬಳಸಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ.
- ಚೇತನ ಯೋಜನೆ ಆಯ್ಕೆಯನ್ನು ಕ್ಲಿಕ್ ಮಾಡಿ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಲಿಂಕ್ ಅನ್ನು ಓಪನ್ ಮಾಡಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಹೆಸರು, ವಿಳಾಸ, ವೈಯಕ್ತಿಕ ವಿವರ, ಉದ್ಯಮದ ವಿವರ ಸೇರಿದಂತೆ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಸ್ವಯಂ ಉದ್ಯೋಗ ಯೋಜನಾ ವರದಿ ಸೇರಿದಂತೆ ಈ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿರುವ ಎಲ್ಲ ವಿವರಗಳು ಸರಿ ಇದೆಯೇ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡು ನಂತರ ಸಬ್ಮೀಟ್ ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸುವ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷರ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಚೇತನ ಯೋಜನೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸಿ.
ಕೊನೆಯ ಮಾತು:
ಕರ್ನಾಟಕ ಸರ್ಕಾರದ ಚೇತನ ಯೋಜನೆಯು ಶೋಷಿತ ಹಾಗೂ ದಮನಿತ ಮಹಿಳೆಯರು, ಮಾಜಿ ದೇವದಾಸಿಯರು ಮತ್ತು ತೃತೀಯ ಲಿಂಗಿಗಳಿಗೆ ಆರ್ಥಿಕ ಪುನರ್ವಸತಿ ಕಲ್ಪಿಸಿ, ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ₹45,000 ಸಹಾಯಧನ ದೊರೆಯಲಿದೆ. ಅರ್ಹ ಫಲಾನುಭವಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 31-10-2026 ರ ಒಳಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ರಾಜ್ಯ ಸರ್ಕಾರದ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಿ



